ಮೈಕೆಲ್ ಕಿಂಡೋ (೨೮ ಜೂನ್ ೧೯೪೬ - ೩೧ ಡಿಸೆಂಬರ್ ೨೦೨೦) ಅವರು ಜಾರ್ಖಂಡ್‌ನ ಬುಡಕಟ್ಟು ಬೆಲ್ಟ್‌ನ ಭಾರತೀಯ ಫೀಲ್ಡ್ ಹಾಕಿ ಆಟಗಾರ. ಅವರು ಭಾರತವನ್ನು ಪ್ರತಿನಿಧಿಸಿ ಫುಲ್ ಬ್ಯಾಕ್ ಡಿಫೆಂಡರ್ ಸ್ಥಾನದಲ್ಲಿ ಆಡಿದರು. ೧೯೭೧ ಪುರುಷರ ಹಾಕಿ ವಿಶ್ವಕಪ್, ೧೯೭೨ ಬೇಸಿಗೆ ಒಲಿಂಪಿಕ್ಸ್, ೧೯೭೩ ಪುರುಷರ ಹಾಕಿ ವಿಶ್ವಕಪ್, ೧೯೭೪ ಏಷ್ಯನ್ ಗೇಮ್ಸ್, ೧೯೭೫ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದರು. ಇದಕ್ಕೂ ಮೊದಲು ಅವರು ಹಲವಾರು ಸ್ಥಳೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ೧೯೭೨ ರಲ್ಲಿ ಅವರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದರು. ಮೈಕೆಲ್ ಕಿಂಡೋ ಅವರು ಅರ್ಜುನ ಪ್ರಶಸ್ತಿಯನ್ನು ಪಡೆದ ಮೊದಲ ಆದಿವಾಸಿ ಕ್ರೀಡಾಪಟು. ಮೈಕೆಲ್ ಅವರು ತನ್ನ ಟ್ಯಾಕ್ಲಿಂಗ್ ಮತ್ತು ಡಾಡ್ಜಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದರು. ನೋ-ಲುಕ್ ಪಾಸ್‌ಗಾಗಿ ಅವರನ್ನು ಭಾರತೀಯ ಹಾಕಿಯಲ್ಲಿ ಪ್ರವರ್ತಕ ಎಂದು ಪರಿಗಣಿಸಲಾಯಿತು. == ಆರಂಭಿಕ ಜೀವನ == ಮೈಕೆಲ್ ಕಿಂಡೋ ಅವರು ೨೮ ಜೂನ್ ೧೯೪೬ ರಂದು ಬಿಹಾರದ (ಈಗ ಜಾರ್ಖಂಡ್) ಒಂದು ಹಳ್ಳಿಯಲ್ಲಿ ಜನಿಸಿದರು. ಅವರು ಕುರ್ಡೆಗ್‌ನಲ್ಲಿರುವ ಆರ್‌ಸಿ ಬಾಯ್ಸ್ ಮಿಡ್ಲ್ ಸ್ಕೂಲ್‌ನಲ್ಲಿ ಮೊದಲು ಹಾಕಿ ಸ್ಟಿಕ್ ಅನ್ನು ತೆಗೆದುಕೊಂಡರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಅವರು ಭಾರತೀಯ ನೌಕಾಪಡೆಗೆ ಸೇರಿದರು. == ವೃತ್ತಿ == === ದೇಶೀಯ ವೃತ್ತಿ === ಮೈಕೆಲ್ ಅವರು ನೌಕಾಪಡೆಗೆ ಸೇರಿದರು. ನೌಕಾಪಡೆಯಲ್ಲಿದ್ದ ಸಮಯದಲ್ಲಿ ಅವರು ೧೯೬೬ ರಿಂದ ೧೯೭೬ ರವರೆಗಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಸರ್ವಿಸಸ್ ಹಾಕಿ ತಂಡಕ್ಕೆ ಆಯ್ಕೆಯಾದರು ಮತ್ತು ಪ್ರತಿನಿಧಿಸಿದರು. ಅವರು ೧೯೭೧ ರಲ್ಲಿ ಅತ್ಯುತ್ತಮ ಸೇವೆಗಳ ಕ್ರೀಡಾಪಟು ಪ್ರಶಸ್ತಿಯನ್ನು ಗೆದ್ದರು. === ಅಂತರರಾಷ್ಟ್ರೀಯ ವೃತ್ತಿಜೀವನ === ಕಿಂಡೋ ಅವರು ೧೯೬೯ ರಲ್ಲಿ ಕೀನ್ಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಮೂಲಕ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪ್ರವೇಶವನ್ನು ಮಾಡಿದರು. ಅವರು ೧೯೭೨ ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಪುರುಷರ ಫೀಲ್ಡ್ ಹಾಕಿ ತಂಡದ ಸದಸ್ಯರಾಗಿದ್ದರು. ಅವರು ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ಮೈಕೆಲ್ ಅವರು ಮೊದಲ ಮೂರು ವಿಶ್ವಕಪ್‌ಗಳಲ್ಲಿ ಆಡಿದ್ದರು. ಅವರು ೧೯೭೧ ರ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ೧೯೭೩ ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ೧೯೭೫ ರ ವಿಶ್ವಕಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು ೧೯೭೪ ರ ಟೆಹ್ರಾನ್ ಏಷ್ಯನ್ ಆಟಗಳಲ್ಲಿ ಫೀಲ್ಡ್ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದರು. == ನಂತರ ಕೆಲಸ == ಮೈಕೆಲ್ ಅವರು ರೂರ್ಕೆಲಾದಲ್ಲಿ ಎಸ್‌‌ಎಐಎಲ್() ಹಾಕಿಯನ್ನು ಸೇರಿಕೊಂಡರು. ೧೭೮ ರಿಂದ ೧೯೮೦ ರವರೆಗೆ ರಾಷ್ಟ್ರೀಯ ಪಂದ್ಯಗಳಲ್ಲಿ ಒಡಿಶಾ ಪ್ರತಿನಿಧಿಸಿದರು. ಅವರು ಜಾರ್ಖಂಡ್‌ನ ತಮ್ಮ ಹಳ್ಳಿಯಲ್ಲಿ ಮಕ್ಕಳಿಗಾಗಿ ಪಂದ್ಯಾವಳಿಗಳನ್ನು ನಡೆಸುತ್ತಿದ್ದರು. ಮೈಕೆಲ್ ಅವರು ೧೯೯೩ ರ ಬಿಕಾನೆರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಒಡಿಶಾ ರಾಜ್ಯ ತಂಡದ ಆಯ್ಕೆಗಾರರಾಗಿದ್ದರು. ಅವರು ರೂರ್ಕೆಲಾದ ಎಸ್‌‌ಎಐಎಲ್() ಹಾಕಿ ಅಕಾಡೆಮಿಯಲ್ಲಿ ಎಸ್‌ಹೆಚ್‌ಎ() ಹಾಕಿ ತರಬೇತಿ ನೀಡಿದರು. == ನಿವೃತ್ತಿ ಮತ್ತು ಪರಂಪರೆ == ಕಿಂಡೋ ಅವರು ತಮ್ಮ ಪತ್ನಿ ಮತ್ತು ಅವರ ಮಗನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಮೈಕೆಲ್ ಕಿಂಡೋ ಅವರು ವಯೋಸಹಜ ಕಾಯಿಲೆಗಳಿಂದಾಗಿ ಇಸ್ಪತ್ ಜನರಲ್ ಆಸ್ಪತ್ರೆಯಲ್ಲಿ ೩೧ ಡಿಸೆಂಬರ್ ೨೦೨೦ ರಂದು ನಿಧನರಾದರು. ಅವರ ಕುಟುಂಬದ ಪ್ರಕಾರ, ಅವರು ಸ್ವಲ್ಪ ಸಮಯದಿಂದ ಹಾಸಿಗೆ ಹಿಡಿದಿದ್ದರು ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ೧ ಜನವರಿ ೨೦೨೦ ಗುರುವಾರ ರಂದು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಶವಾಗಾರದಿಂದ ರೂರ್ಕೆಲಾ ಹಾಕಿ ಕ್ರೀಡಾಂಗಣಕ್ಕೆ ತರಲಾಯಿತು ಮತ್ತು ಜಿಲ್ಲಾ ಪೋಲೀಸರು ಗೌರವ ರಕ್ಷೆಯೊಂದಿಗೆ ಗೌರವ ಸಲ್ಲಿಸಿದರು. ನಂತರ ಅವರ ದೇಹವನ್ನು ಹಮೀರ್‌ಪುರ ಚರ್ಚ್‌ಗೆ ಕೊಂಡೊಯ್ಯಲಾಯಿತು. ಚರ್ಚ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಅವರು ಗುಮ್ಲಾ-ಸುಂದರ್‌ಗಢ ಬುಡಕಟ್ಟು ಬೆಲ್ಟ್‌ನಾದ್ಯಂತ ಬುಡಕಟ್ಟು ಹಾಕಿಯ ಮಹತ್ವಾಕಾಂಕ್ಷೆಯನ್ನು ಹುಟ್ಟುಹಾಕಿದರು. ಈ ಪ್ರದೇಶವನ್ನು ಇಂದು ಹಾಕಿ ಆಟಗಾರರ ಕನ್ವೇಯರ್ ಬೆಲ್ಟ್ ಎಂದು ಪರಿಗಣಿಸಲಾಗಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಮೈಕೆಲ್ ಅವರ ವಿದ್ಯಾರ್ಥಿ ದಿಲೀಪ್ ಟಿರ್ಕಿ ಅವರ ಪ್ರಕಾರ, ಮೈಕೆಲ್ ದಶಕಗಳ ಹಿಂದೆ ಆಡುವುದನ್ನು ನಿಲ್ಲಿಸಿದರೂ ಹಾಕಿಯೊಂದಿಗಿನ ತನ್ನ ಒಡನಾಟವನ್ನು ಅವನು ಎಂದಿಗೂ ಬಿಡಲಿಲ್ಲ. ೧೯೭೫ ರ ಚಿನ್ನದ ತಂಡದ ಕಿಂಡೋ ಅವರ ಸಹೋದ್ಯೋಗಿಗಳು ಅವರನ್ನು ಕಿಂಡಿ ಭಾಯ್ ಎಂದು ಕರೆಯುತ್ತಿದ್ದರು. ಅವರು ಎಂದಿಗೂ ತಂಡದ ಉತ್ಸಾಹವನ್ನು ಕುಸಿಯಲು ಬಿಡಲಿಲ್ಲ ಎಂದು ಅವರು ಹೇಳುತ್ತಾರೆ. ಅವರ ಗೌರವಾರ್ಥವಾಗಿ ಇಂದಿಗೂ ಸಿಮ್ಡೆಗಾ ಜಿಲ್ಲೆಯ ಸೇಂಟ್ ಮೇರಿ ಶಾಲೆಯು 'ಮೈಕೆಲ್ ಟೂರ್ನಮೆಂಟ್' ಎಂದು ಹಾಕಿ ಪಂದ್ಯಾವಳಿಯನ್ನು ನಡೆಸುತ್ತಿದೆ. === ಪ್ರಶಸ್ತಿಗಳು === ಗೆದ್ದ ಮತ್ತು ಸ್ವೀಕರಿಸಿದ ಎಲ್ಲಾ ಪದಕಗಳ ಪಟ್ಟಿ ಅತ್ಯುತ್ತಮ ಸೇವೆಗಳು ಕ್ರೀಡಾಪಟು ಪ್ರಶಸ್ತಿ - ೧೯೭೧ ಮೂರನೇ ಸ್ಥಾನ, ಬಾರ್ಸಿಲೋನಾ ಪುರುಷರ ಹಾಕಿ ವಿಶ್ವಕಪ್ — ೧೯೭೧ ಮೂರನೇ ಸ್ಥಾನ (ಕಂಚು), ಮ್ಯೂನಿಚ್ ಬೇಸಿಗೆ ಒಲಿಂಪಿಕ್ಸ್ - ೧೯೭೨ ಅರ್ಜುನ ಪ್ರಶಸ್ತಿ - ೧೯೭೨ ರನ್ನರ್-ಅಪ್, ಆಮ್ಸ್ಟೆಲ್ವೀನ್ ಪುರುಷರ ಹಾಕಿ ವಿಶ್ವಕಪ್ — ೧೯೭೩ ಎರಡನೇ ಸ್ಥಾನ (ಬೆಳ್ಳಿ), ಟೆಹ್ರಾನ್ ಏಷ್ಯನ್ ಗೇಮ್ಸ್ - ೧೯೭೪ ವಿಜೇತ, ಕೌಲಾಲಂಪುರ್ ಪುರುಷರ ಹಾಕಿ ವಿಶ್ವಕಪ್ — ೧೯೭೫ : == ಉಲ್ಲೇಖಗಳು ==